ಅರವಿಂದ ಮಾಲಗಿತ್ತಿ
From Wikipedia
ಅರವಿಂದ ಮಾಲಗಿತ್ತಿ(ಜನನ: ೧೯೫೬) - ಕನ್ನಡದ ಸಾಹಿತಿಗಳಲ್ಲೊಬ್ಬರು.
ಪರಿವಿಡಿ |
[ಬದಲಾಯಿಸಿ] ಜೀವನ
ಅರವಿಂದ ಮಾಲಗಿತ್ತಿಯವರು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಪಿಎಚ್.ಡಿ ಪದವೀಧರರಾದ ಇವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧನಾತ್ಮಕ ಸಾಹಿತ್ಯ ರಚನೆಯಿಂದ ಪ್ರಸಿದ್ಧರಾಗಿರುವ ಅವರು ವೈಚಾರಿಕ ನೆಲೆಗಟ್ಟಿನಲ್ಲಿ ಶೋಷಣೆಯ ವಿರುದ್ಧ ತೀಕ್ಷ್ಣವಾಗಿ ಬರೆಯುವ ಜವಾಬ್ದಾರಿಯುತ ಸಾಹಿತಿಯೆಂದು ವಿಮರ್ಶಕರ ಅಭಿಪ್ರಾಯ.
[ಬದಲಾಯಿಸಿ] ಕವನ ಸಂಕಲನಗಳು
- ಕಪ್ಪು ಕಾವ್ಯ
- ಮೂರನೇ ಕಣ್ಣು
- ನಾದ ನಿನಾದ
- ಸಿಲಿಕಾನ್ ಸಿಟಿ ಮತ್ತು ಕೋಗಿಲೆ
- ಮೂಕನಿಗೆ ಬಾಯಿ ಬಂದಾಗ
- ಚಂಡಾಲ ಸ್ವರ್ಗಾರೋಹಣಂ
[ಬದಲಾಯಿಸಿ] ಕಾದಂಬರಿಗಳು
- ಕಾರ್ಯ
[ಬದಲಾಯಿಸಿ] ಕಥಾಸಂಕಲನಗಳು
- ಮುಗಿಯದ ಕಥೆಗಳು
[ಬದಲಾಯಿಸಿ] ಆತ್ಮ ಕಥನ
- ಗೌರ್ಮೆಂಟ್ ಬ್ರಾಹ್ಮಣ
[ಬದಲಾಯಿಸಿ] ಸಂಶೋಧನಾತ್ಮಕ ವಿಮರ್ಶೆಗಳು
- ಜಾನಪದ ಶೋಧ
- ಭೂತಾರಾಧನೆ
- ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ
- ದಲಿತ ಸಾಹಿತ್ಯ ಚಳುವಳಿಯ ತಾತ್ವಿಕ ಚಿಂತನೆ
- ದಲಿತ ಪ್ರಜ್ಞೆ
- ಸಾಹಿತ್ಯ ಸಮಾಜ ಮತ್ತು ಸಂಸ್ಕೃತಿ
[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು
- ಮೂಕನಿಗೆ ಬಾಯಿ ಬಂದಾಗ ಕವನ ಸಂಕಲನಕ್ಕೆ ದೇವರಾಜ್ ಬಹದ್ದೂರ್ ಪ್ರಶಸ್ತಿ
- ಕಪ್ಪುಕಾವ್ಯ ಕೃತಿಗೆ ನರಸಿಂಹಯ್ಯ ಪುರಸ್ಕಾರ
- ಗೌರ್ಮೆಂಟ್ ಬ್ರಾಹ್ಮಣ ಆತ್ಮಕಥನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಸಮಗ್ರ ಸಾಹಿತ್ಯಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ