ಇಂದಿರಾ ಗೋಸ್ವಾಮಿ
From Wikipedia
ಇಂದಿರಾ ಗೋಸ್ವಾಮಿ(ಜನನ: ೧೯೪೨) - ಸಮಕಾಲೀನ ಅಸ್ಸಾಮಿ ಸಾಹಿತ್ಯದ ಪ್ರಮುಖ ಲೇಖಕಿ . ಅಸ್ಸಾಮಿನ ಗುವಾಹಟಿಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ.
ಅವರ ಕಾದಂಬರಿಗಳು ತಮ್ಮ ಕಥಾಹಂದರಗಳ ನಾವೀನ್ಯತೆ ಹಾಗೂ ಸ್ವಂತಿಕೆಗೆ ಹೆಸರಾಗಿವೆ.
[ಬದಲಾಯಿಸಿ] ಪ್ರಮುಖ ಕೃತಿಗಳು
- ಅಹಿರಾನ್
- ನೀಲಕಂಠಿ ಬ್ರಜ
- ದಂತಲ್ ಹಾತೀರ್ ಉನೆ ಖಾವಾ ಹೌದಾ
- ಆಧಲೇಖ ದಸ್ತಾವೇಜ್ (ಆತ್ಮಕಥನ)