ಉಡುಪಿ
From Wikipedia
ಉಡುಪಿ ಕರ್ನಾಟಕದ ಒಂದು ಜಿಲ್ಲೆ. ವಿಶ್ವ ವಿಖ್ಯಾತ ಕೃಷ್ಣ ಮಂದಿರ ಉಡುಪಿಯಲ್ಲಿಯೇ ಇರುವುದು.
ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಸ್ಥಾಪಿಸಲಾಯಿತು. ಉತ್ತರದ ಮೂರು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ವನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕ ಮಾಡಿ ಉಡುಪಿ ಜಿಲ್ಲೆಯಾಗಿ ಮಾಡಲಾಯಿತು. ಇಲ್ಲಿನ ಜನಸಂಖ್ಯೆ (೨೦೦೧ ರಂತೆ) ೧.೧೦೯,೪೯೪ ೧೯೯೧ರಿಂದ ೬.೮ ಪ್ರತಿಶತ ಹೆಚ್ಚು.
ಇಲ್ಲಿನ ಪ್ರಮುಖ ಭಾಷೆಗಳು ಕನ್ನಡ, ತುಳು, ಹಾಗೂ ಕೊಂಕಣಿ. ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಕೆಲವೊಮ್ಮೆ ತುಳುನಾಡು ಎಂದು ಕರೆಯಲ್ಪಡುತ್ತವೆ.
ಪರಿವಿಡಿ |
[ಬದಲಾಯಿಸಿ] ಅಷ್ಟ ಮಠಗಳು
ಉಡುಪಿಯ ಕೇಂದ್ರಬಿಂದುವಾದ ಕೃಷ್ಣ ಮಠವನ್ನು ಅಷ್ಟ ಮಠಗಳು ನಡೆಸುತ್ತವೆ. ಅಷ್ಟ ಮಠಗಳು ಕೆಳಕಂಡಂತಿವೆ:
- ಪುತ್ತಿಗೆ
- ಪೇಜಾವರ
- ಫಲಿಮಾರು
- ಅದಮಾರು
- ಸೋದೆ
- ಶೀರೂರು
- ಕಾಣೆಯೂರು
- ಕೃಷ್ಣಾಪುರ
[ಬದಲಾಯಿಸಿ] ಉಡುಪಿ ಶೈಲಿಯ ಅಡುಗೆ
ಉಡುಪಿ ಶೈಲಿಯ ಅಡುಗೆ ವಿಶ್ವವಿಖ್ಯಾತ. ಉಡುಪಿ ಹೋಟೆಲ್‌ಗಳೂ ವಿಶ್ವದಾದ್ಯಂತ ಪ್ರಸಿದ್ಧ. ಸಾಧಾರಣವಾಗಿ ಸಸ್ಯಾಹಾರಿ ಅಡುಗೆಯಿಂದ ಕೂಡಿದ ಉಡುಪಿ ಶೈಲಿಯ ಪಾಕಶಾಸ್ತ್ರ, ವಿದೇಶಗಳಲ್ಲೂ ಪ್ರಸಿದ್ಧ.
[ಬದಲಾಯಿಸಿ] ಇವನ್ನೂ ನೋಡಿ
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ