ಎಂ.ಜೀವನ
From Wikipedia
ಎಂ.ಜೀವನ ಇವರು ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಜನಪ್ರಿಯ ಸಾಹಿತಿಗಳು ಹಾಗು ಪತ್ರಕರ್ತರು.
[ಬದಲಾಯಿಸಿ] ಸಾಹಿತ್ಯ
ಇವರು ೬೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಇವರ ಕಾದಂಬರಿ “ಹುತಾತ್ಮನ ಹೆಂಡತಿ” ರಾಜಕೀಯ ವಲಯದಲ್ಲಿ ಕೋಲಾಹಲವನ್ನೆಬ್ಬಿಸಿತು.
[ಬದಲಾಯಿಸಿ] ಪತ್ರಿಕೋದ್ಯಮ
ಇವರು ಅನೇಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದು, ಕೆಲವು ಇಂತಿವೆ:
- ತಾರಕ (ಮರಾಠಿ ಚಲನ ಚಿತ್ರ ಪತ್ರಿಕೆ)
- ತರಂಗ (ಚಲನಚಿತ್ರ ಮಾಸಿಕ)
- ವಿಜಯ (ದಿನಪತ್ರಿಕೆ)
- ಹುಬ್ಬಳ್ಳಿ ಸಮಾಚಾರ (ದಿನಪತ್ರಿಕೆ)
- ಮಹಾನಗರ ವಾರ್ತೆ (ವಾರಪತ್ರಿಕೆ)
- ಪ್ರಪಂಚ (ವಾರಪತ್ರಿಕೆ)
[ಬದಲಾಯಿಸಿ] ಪುರಸ್ಕಾರ
ಇವರಿಗೆ ೧೯೮೭ರಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.