ಗೊರೂರು ರಾಮಸ್ವಾಮಿ ಅಯ್ಯಂಗಾರ್
From Wikipedia
೧೯೦೪, ಜುಲೈ ೪ರಂದು ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದ ರಾಮಸ್ವಾಮಿ ಅಯ್ಯಂಗಾರರು, ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಅವರೊಬ್ಬ ಅಪ್ರತಿಮ ಗಾಂಧಿವಾದಿ.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ ಮತ್ತು ಜೀವನ
ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿ ವಿದ್ಯಾಭ್ಯಾಸವನ್ನು ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ೧೯೪೨ರ ಭಾರತ ಬಿಟ್ಟು ತೊಲಗಿ ('ಚಲೇಜಾವ್ ಚಳುವಳಿ'), ಸ್ವಾತಂತ್ರ್ಯಾನಂತರ ಮೈಸೂರಿನಲ್ಲಿ ಪ್ರಜಾರಾಜ್ಯ ಸ್ಥಾಪನೆಗಾಗಿ ನಡೆದ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಪಾಲ್ಗೊಂಡು ಸಕ್ರಿಯ ಪಾತ್ರ ವಹಿಸಿದ್ದರು. ರಾಜ್ಯ ವಿಧಾನಸಭಾ ಸದಸ್ಯರೂ ಆಗಿದ್ದರು.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿಗಳು
- ಹೇಮಾವತಿ
- ಪುನರ್ಜನ್ಮ
- ಮೆರವಣಿಗೆ
- ಊರ್ವಶಿ
[ಬದಲಾಯಿಸಿ] ಪ್ರಬಂಧ/ಕಥಾ ಸಂಕಲನಗಳು
- ಹಳ್ಳಿಯ ಚಿತ್ರಗಳು
- ಗರುಡಗಂಬದ ದಾಸಯ್ಯ
- ನಮ್ಮ ಊರಿನ ರಸಿಕರು
- ಶಿವರಾತ್ರಿ
- ಕಮ್ಮಾರ ವೀರಭದ್ರಾಚಾರಿ
- ಬೆಸ್ತರ ಕರಿಯ
- ಬೆಟ್ಟದ ಮನೆಯಲ್ಲಿ ಮತ್ತು ಇತರ ಕಥೆಗಳು
- ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
- ಗೋಪುರದ ಬಾಗಿಲು
- ಉಸುಬು
- ವೈಯ್ಯಾರಿ
- ಕನ್ಯಾಕುಮಾರಿ ಮತ್ತು ಇತರ ಕಥೆಗಳು
[ಬದಲಾಯಿಸಿ] ಪ್ರವಾಸ ಕಥನ
- ಅಮೇರಿಕಾದಲ್ಲಿ ಗೊರೂರು
[ಬದಲಾಯಿಸಿ] ಅನುವಾದಗಳು
- ಮಲೆನಾಡಿನವರು
- ಭಕ್ತಿಯೋಗ
- ಭಗವಾನ್ ಕೌಟಿಲ್ಯ
[ಬದಲಾಯಿಸಿ] ಪ್ರಶಸ್ತಿ, ಗೌರವಗಳು
- ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
- ೧೯೮೦ರಲ್ಲಿ 'ಅಮೇರಿಕಾದಲ್ಲಿ ಗೊರೂರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
- ೧೯೮೨ರಲ್ಲಿ ಶಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
- ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ದೇವರಾಜ ಬಹದ್ದೂರ್ ಪ್ರಶಸ್ತಿ
- ಅಭಿಮಾನಿಗಳು ಅರ್ಪಿಸಿದ ಗ್ರಂಧ ಗೊರೂರು ಗೌರವ ಗ್ರಂಥ ಸಂಸ್ಮರಣ ಗ್ರಂಧ ಹೇಮಾವತಿಯ ಚೇತನ.
[ಬದಲಾಯಿಸಿ] ನಿಧನ
ಗೊರೂರರು ೧೯೯೧, ಸೆಪ್ಟೆಂಬರ್ ೮ರಂದು ನಿಧನರಾದರು.