ಗೋಪಾಲದಾಸರು
From Wikipedia
[ಬದಲಾಯಿಸಿ] ಕಾಲ
ಕ್ರಿ.ಶ. ೧೭೨೧-೧೭೬೩
[ಬದಲಾಯಿಸಿ] ಜೀವನ
ರಾಯಚೂರು ಜಿಲ್ಲೆಯ, ದೇವನದುರ್ಗ ತಾಲೂಕಿನ, ಮಸರುಕಲ್ಲು ಗೋಪಾಲದಾಸರ ಜನ್ಮಸ್ಥಳ. ತಂದೆ ಮುರಾರಿ ಮತ್ತು ತಾಯಿ ವೆಂಕಮ್ಮನವರು. ಇವರು ದಾಸಕೂಟಕ್ಕೆ ಸೇರಿದ್ದು ಕೃಷಿಕರಾಗಿದ್ದರು. ಪೂರ್ವಾಶ್ರಮದ ಹೆಸರು ಭಾಗಣ್ಣ. ವಿಜಯದಾಸರು ಗೋಪಾಲದಾಸರಿಗೆ ಗುರುಗಳಾಗಿದ್ದರೆಂದು ತಿಳಿದುಬಂದಿದೆ. ಗೃಹಸ್ಥಾಶ್ರಮ ಸ್ವೀಕರಿಸಲಿಲ್ಲ.
[ಬದಲಾಯಿಸಿ] ಕೃತಿಗಳು
ಗೋಪಾಲ ವಿಠಲ ಎಂಬುದು ಗೋಪಾಲದಾಸರ ಅಂಕಿತವಾಗಿದೆ. ಇದಕ್ಕೂ ಮೊದಲು ವೆಂಕಟಕೃಷ್ಣ ಎನ್ನುವ ಅಂಕಿತದಲ್ಲಿ ಹಲವಾರು ಕೃತಿಗಳನ್ನು ರಚಿಸಿರಬಹುದೆಂಬ ಉಲ್ಲೇಖಗಳಿದ್ದರೂ ಸ್ವಷ್ಟ ಆಧಾರಗಳಿಲ್ಲ. ಈವರೆಗೆ ಲಭ್ಯವಾಗಿರುವ ಗೋಪಾಲದಾಸರ ಸಂಖ್ಯೆ ೧೮೩.
ಉತ್ತನೂರು ಗೋಪಾಲದಾಸರ ಬೃಂದಾವನ ಇರುವ ಸ್ಥಳ.