ಜೆ.ಆರ್.ಡಿ.ಟಾಟಾ
From Wikipedia
ಜಹಾಂಗೀರ್ ರತನ್‍ಜಿ ದಾದಾಭಾಯಿ ಟಾಟಾ (ಜುಲೈ ೨೯, ೧೯೦೪ - ನವೆಂಬರ್ ೨೯, ೧೯೯೩) ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಭಾರತೀಯ ವಾಯುಯಾನದ ಹರಿಕಾರರು.
ಜೆ.ಆರ್.ಡಿ. ಟಾಟಾ ಫ್ರಾನ್ಸ್ ನಲ್ಲಿ ಜನಿಸಿದರು. ಅವರ ತಂದೆ ಭಾರತೀಯರು ಮತ್ತು ತಾಯಿ ಫ್ರೆಂಚ್. ಫ್ರಾನ್ಸ್ ನ ವಾಯುಯಾನದ ಹರಿಕಾರ ಲೂಯಿಸ್ ಬ್ಲೇರಿಯಟ್ ರಿಂದ ಸ್ಫೂರ್ತಿ ಪಡೆದ ಟಾಟಾ, ೧೯೨೯ ರಲ್ಲಿ ಭಾರತದ ಪ್ರಪ್ರಥಮ ಪೈಲಟ್ ಲೈಸೆನ್ಸ್ ಅನ್ನು ಪಡೆದರು. ನಂತರ ಭಾರತೀಯ ವಾಯುಯಾನದ ಪಿತಾಮಹ ಎನಿಸಿಕೊಂಡಿದ್ದಾರೆ. ೧೯೩೨ ರಲ್ಲಿ ಟಾಟಾ ಏರ್‍ಲೈನ್ಸ್ ಎಂಬ ಹೆಸರಿನಲ್ಲಿ ಭಾರತದ ಮೊದಲ ವಾಯುಸಂಚಾರ ಸಂಸ್ಥೆಯನ್ನೂ ತೆರೆದರು. ಇದೇ ಸಂಸ್ಥೆ ಮುಂದೆ ೧೯೪೬ ರಲ್ಲಿ ಏರ್ ಇಂಡಿಯಾ ಎಂಬ ಹೆಸರು ಪಡೆಯಿತು.
ಮುಂದೆ ಕೆಲ ದಶಕಗಳ ಕಾಲ ಟಾಟಾ ಗುಂಪಿನ ಸಂಸ್ಥೆಗಳನ್ನು ನಡೆಸಿದರು. ಇವರ ಸಂಸ್ಥೆಗಳು ಅನೇಕ ಕ್ಷೇತ್ರಗಳಲ್ಲಿ ಹರಡಿ ಮುಖ್ಯವಾಗಿ ಉಕ್ಕು, ಎಂಜಿನಿಯರಿಂಗ್ ಮತ್ತು ವಿದ್ಯುತ್ ಯಂತ್ರಗಳ ಕೈಗಾರಿಕೆಗಳು. ಮಾರುಕಟ್ಟೆಯಲ್ಲಿ ನೈತಿಕ ಮಾರ್ಗವನ್ನು ಅನುಸರಿಸಿಯೂ ಯಶಸ್ವಿಯಾದ ಉದ್ಯಮಿಯೆಂದು ಟಾಟಾ ಜನಪ್ರಿಯರಾಗಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಕ್ಷೇತ್ರಗಳಲ್ಲಿ ಅವರ ಕಾಣಿಕೆಗಳಿಗಾಗಿ ೧೯೯೨ ರಲ್ಲಿ ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅವರು ನಿಧನರಾದಾಗ (೧೯೯೩), ಭಾರತೀಯ ಸಂಸತ್ತು ಶೋಕಾಚರಣೆಯ ಪ್ರಯುಕ್ತ ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿತ್ತು.