ಮುಳುಬಾಗಿಲು
From Wikipedia
ಮುಳುಬಾಗಿಲು - ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿನ ಒಂದು ಊರು. ಆಂಧ್ರ ಪ್ರದೇಶದಗಡಿಯಲ್ಲಿರುವ ಜಿಲ್ಲೆ. ಇಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳನ್ನುಮಾತನಾಡುತ್ತಾರೆ. ಪಶ್ಚಿಮ ದಿಕ್ಕಿನಿಂದ ಕರ್ನಾಟಕವನ್ನು ಪ್ರವೇಶಿಸಲು ಇದು ಬಾಗಿಲು. ಕರ್ನಾಟಕದ ಮೂಡಣ ಬಾಗಿಲು - ಮೂಡು ಬಾಗಿಲು - ಮುಂದೆ ಅದು ಮುಳುಬಾಗಿಲು ಎನಿಸಿಕೊಂಡಿದೆ. ಇಲ್ಲಿ ಅನೇಕ ದೇವಸ್ಥಾನಗಳಿವೆ. ಈ ಊರಿಗೆ ಮುಳಬಾಗಿಲು ಎಂಬ ಹೆಸರೂ ರೂಢಿಯಲ್ಲಿದೆ.
[ಬದಲಾಯಿಸಿ] ಭೂಗೋಳ
ಬೆಂಗಳೂರಿನಿಂದ ಸುಮಾರು ೭೦ ಕಿ ಮೀ ದೂರದಲ್ಲಿರುವ ಈ ಊರು, ಕರ್ನಾಟಕ - ಆಂಧ್ರ ಪ್ರದೇಶ ಸರಹದ್ದಿನ ಹತ್ತಿರ ಇದೆ. ಈ ಕಾರಣದಿಂದ ಇಲ್ಲಿ ತೆಲುಗು ಮಾತನಾಡುವವರು ಬಹಳ ಸಂಖ್ಯೆಯಲ್ಲಿ ಇದ್ದಾರೆ.
[ಬದಲಾಯಿಸಿ] ಪ್ರವಾಸೀ ಕ್ಷೇತ್ರ
ಈ ಊರಿನಲ್ಲಿ ಬಹಳ ಪ್ರಖ್ಯಾತವಾದ ಆಂಜನೇಯನ ದೇವಸ್ಥಾನವಿದೆ. ಊರಿನಿಂದ ಕೆಲವೇ ಮೈಲಿಗಳ ದೂರದಲ್ಲಿ ಕುರುಡುಮಲೆ ದೇವಸ್ಥಾನಗಳಿವೆ. ಇಲ್ಲಿ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದ ಪ್ರಮುಖರಾಗಿರುವ ಶ್ರೀಪಾದರಾಜರ ಬೃಂದಾವನವಿರುವ ನರಸಿಂಹ ತೀರ್ಥವೂ ಇದೆ.