ಶರೀಫ
From Wikipedia
ಶಿಶುವಿನಹಾಳ ಎಂಬ ಊರಿನಲ್ಲಿ ನೆಲೆಸಿದ ಸಾಧು, ಮಹಾನ್ ಸಮಾಜ ಸೇವಕ ಹಾಗೂ ಕನ್ನಡ ಹಾಡುಗಾರ.
[ಬದಲಾಯಿಸಿ] ವಿಶೇಷ
ಅವರು ತತ್ವಪದಗಳ ರೂವಾರೀ, ತತ್ವಪದ ಎಂದರೆ ಜೀವನದಲ್ಲಿ ಮನುಷ್ಯ ಜೀವ ಮಾಡುವ ತಪ್ಪುಗಳನ್ನು, ಯೊಚಿಸುವ ರೀತಿಯನ್ನು ಯಾವೊದೋ ಒಂದು ಸನ್ನಿವೇಶಕ್ಕೆ ಹೊಲಿಸಿ ಹಾಡಿನಿಂದ ವಿವರಿಸುವದು. ಆ ಹಾಡನ್ನು ನೇರ ಅರ್ಥದಲ್ಲಿ ಕೇಳೀದರೆ ವಿಚಿತ್ರವೆನಿಸುವುದು ಆದರೆ ಅದರ ತಿರುಳು ಅರಿತು ಜೀವನಕ್ಕೆ ಹೊಲಿಸಿದರೆ ಅದರ ಅರ್ಥ ಹೊರ ಹೊಮ್ಮುವುದು. ಅವರು ಮುಸ್ಲಿಮರಾಗಿದ್ದರೂ ಅವರ ಗುರುಗಳು ಬ್ರಾಹ್ಮಣ ಗೊವಿಂದ ಭಟ್ಟರು. ಅವರ ಗುರು-ಶಿಷ್ಯ ಸಂಬಂಧ ಉತ್ತರ ಕರ್ನಾಟಕದ ಮನೆಮಾತಾಗಿದೆ. ಇವರ ತತ್ವಪದಗಳ ಕೊನೆಯಲ್ಲಿ ಸಾಮಾನ್ಯವಾಗಿ ಶಿಶುನಾಳಧೀಶ ಹಾಗೂ ಗುರು ಗೊವಿಂದರ ಉಲ್ಲೇಖವಿರುತ್ತದೆ. ನವಲಗುಂದದ ನಾಗಲಿಂಗ ಸ್ವಾಮಿಗಳು ಇವರ ಪರಮ ಸ್ನೇಹಿತರು. ಹುಬ್ಬಳ್ಳಿಯ ಸಿದ್ಧಾರೂಢರೂ ಇವರ ಸಮಕಾಲೀನರು
[ಬದಲಾಯಿಸಿ] ವಿವರ
ಅವರ ಗೀತೆಗಳು ಇಂದಿಗೂ ಪ್ರಸ್ತುತ ಹಾಗೂ ಇಂಪಾಗಿವೆ. ಉತ್ತರ ಕರ್ನಾಟಕದ ಮನೆ ಮನೆಯಲ್ಲೂ ಅವರ ಗೀತೆಗಳನ್ನು ಕೇಳಲಾಗುತ್ತದೆ. K.S.ಅಶ್ವಥ್ ಅವರು ಅವರ ಗೀತೆಗಳನ್ನು ಬೇರೆ ಪ್ರದೇಶಗಳಲ್ಲೂ ಪ್ರಚಲಿತ ಮಾಡುವಲ್ಲಿ ಸಫಲರಾಗಿದ್ದಾರೆ.
[ಬದಲಾಯಿಸಿ] ಅವರು ರಚಿಸಿದ ಕೆಲವು ಜನಪ್ರಿಯ ಗೀತೆಗಳು
- ಕೋಡಗನ ಕೋಳಿ ನುಂಗಿತ್ತಾ ತಂಗಿ,ಕೋಡಗನ ಕೋಳಿ ನುಂಗಿತ್ತಾ
- ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
- ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರಿದೆ ಬಾರಿಸದಿರು ತಂಬೂರಿ
- ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗಿನ್ಯಾಕೋ?
- ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ
- ಸೋರುತಿಹುದು ಮನೆಯ ಮಾಳಿಗಿ, ಅಜ್ಙಾನದಿಂದ
- ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ,ಎಲ್ಲರಂಥವನಲ್ಲ ನನ ಗಂಡ
- ಎಂಥಾ ಮೊಜಿನ ಕುದುರಿ,ಹತ್ತಿದಮ್ಯಾಗ ತಿರುಗುವುದು ಹನ್ನೊಂದು