ಹಿಂದೂ ಧರ್ಮ
From Wikipedia
ಹಿಂದೂ ಧರ್ಮವು ವಿಶ್ವದ ಅತ್ಯಂತ ಸನಾತನ ಧರ್ಮವೆಂದು ನಂಬಲಾಗಿದೆ. ಒಂದು ಅಂದಾಜಿನ ಪ್ರಕಾರ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ನಂತರ ಜಗತ್ತಿನಲ್ಲಿ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿರುವುದು ಹಿಂದೂ ಧರ್ಮವೇ ಎಂಬುದಾಗಿ ತಿಳಿಯಲಾಗಿದೆ. ಭಾರತ, ನೇಪಾಳ ಹಾಗೂ ಶ್ರೀಲಂಕಾದ ಕೆಲವು ಭಾಗ ಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ.ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು. ಪ್ರಪಂಚದಾದ್ಯಂತ, ಸುಮಾರು ೯೦ ಕೋಟಿ (೯೦೦ ಮಿಲಿಯನ್) ಹಿಂದೂ ಧರ್ಮದ ಅನುಯಾಯಿಗಳಿದ್ದಾರೆ. ಇದರಲ್ಲಿ, ಸುಮಾರು ೮೯ ಕೊಟಿ (೮೯೦ ಮಿಲಿಯನ್) ಅನುಯಾಯಿಗಳು, ಭಾರತದಲ್ಲಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಹಿಂದೂ ಧರ್ಮದ ಮೌಲ್ಯಗಳು
ಹಿಂದೂ ಧರ್ಮದ ನಂಬಿಕೆಗಳು, ಆಚರಣೆಗಳು ಹಾಗು ತತ್ವಶಾಸ್ತ್ರ, ವೈದಿಕ ಸಂಪ್ರದಾಯದಿಂದ ಬೆಳೆದು ಬಂದಿದೆ. ಬೌದ್ಧ ಧರ್ಮ, ಜೈನ ಧರ್ಮ ಹಾಗು ಸಿಖ್ ಧರ್ಮಗಳು ಸಹ ಹಿಂದೂ ಧರ್ಮದ ಹಲವಾರು ನಂಬಿಕೆಗಳು ಹಾಗು ಮೌಲ್ಯಗಳನ್ನು ಅಳವಡಿಸಿಕೊಂಡಿವೆ.
[ಬದಲಾಯಿಸಿ] ಹಿಂದೂ ಧರ್ಮದ ನಂಬಿಕೆಗಳು
ಹಿಂದೂ ಧರ್ಮದ ಪ್ರಮುಖ ನಂಬಿಕೆಗಳೆಂದರೆ
ಧರ್ಮ - ಪ್ರತಿಯೊಬ್ಬ ಮನುಷ್ಯನ ಮೌಲ್ಯ, ಕರ್ತವ್ಯ ಹಾಗು ಸಮಾಜಿಕ ಜವಾಬ್ದಾರಿ.
ಸಂಸಾರ
ಕರ್ಮ - ಮನುಷ್ಯ ತಾನು ಮಾಡುವ ಕ್ರಿಯೆಗಳಿಗೆ ಅನುಭವಿಸುವ ಪ್ರತಿಫಲ.
ಭಕ್ತಿ - ದೇವರ ಸೇವೆ.
ಪುನರ್ಜನ್ಮ - ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣ.
ಜ್ಞಾನ
ಆತ್ಮ
ಪರಮಾತ್ಮ
ಸ್ವರ್ಗ
ನರಕ
ಮೋಕ್ಷ
[ಬದಲಾಯಿಸಿ] ದೇವರ ಸ್ವರೂಪ
[ಬದಲಾಯಿಸಿ] ಹಿಂದೂ ಧರ್ಮದ ಪವಿತ್ರ ಗ್ರಂಥಗಳು
[ಬದಲಾಯಿಸಿ] ಹಿಂದೂ ಧರ್ಮದ ದೇವತೆಗಳು
ಹಿಂದೂ ಧರ್ಮದಲ್ಲಿ ಕೋಟ್ಯಾಂತರ ದೇವತೆಗಳ ಹೆಸರು ಮೂಡಿಬರುತ್ತದೆ. ಹಾಗಾಗಿ ಇತರ ಧರ್ಮಗಳಂತೆ ಇಲ್ಲಿ ಒಂದೇ ದೇವತೆಯನ್ನು ಪೂಜಿಸದೇ ಹಲವಾರು ದೇವತೆಗಳನ್ನು ಪೂಜಿಸುತ್ತಾರೆ. ಈ ಧರ್ಮದಲ್ಲಿ ಸುಮಾರು ೩ ಕೋಟಿಗೂ ಹೆಚ್ಚು ದೇವರುಗಳ ಪ್ರಸ್ತಾಪವಿದೆ. ನಿಸರ್ಗದಲ್ಲಿರುವ ಕೆಲವು ಸಸ್ಯಗಳನ್ನು, ಹಾವು,ಹಸು ಮುಂತಾದ ಪ್ರಾಣಿಗಳನ್ನೂ ದೇವರೆಂದು ನಂಬಿ ಪೂಜಿಸಲಾಗುತ್ತದೆ. ನಾಗರ ಪಂಚಮಿ, ಗೋಪೂಜೆ, ತುಳಸಿ ಪೂಜೆ ಮುಂತಾದ ಆಚರಣೆಗಳು ಈ ನಂಬಿಕೆಗಳಿಂದಲೇ ಪ್ರಾರಂಭವಾಗಿವೆ.