ಕೆ.ವಿ.ಸುಬ್ಬಣ್ಣ
From Wikipedia
ಕೆ.ವಿ.ಸುಬ್ಬಣ್ಣ (ಫೆಬ್ರುವರಿ ೨೦, ೧೯೩೨ - ಜುಲೈ ೧೬, ೨೦೦೫) ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ.
[ಬದಲಾಯಿಸಿ] ಜೀವನ
ಕೆ.ವಿ.ಸುಬ್ಬಣ್ಣನವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು.
[ಬದಲಾಯಿಸಿ] ಕೃತಿಗಳು
- ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು
[ಬದಲಾಯಿಸಿ] ಸಂದ ಪ್ರಶಸ್ತಿಗಳು
- ೧೯೯೧ ರಲ್ಲಿ ಫಿಲಿಫೀನ್ಸ್ ಸರ್ಕಾರ ಕೊಡುವ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ.
- ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮೆ ಪ್ರಶಸ್ತಿ.
- ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ (ಆದರೆ ಸುಬ್ಬಣ್ಣ ಅವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು).
ಸುಬ್ಬಣ್ಣ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಯಲ್ಲಿ ಕನ್ನಡದ ಸಂದರ್ಭದ ಬಗ್ಗೆ ಅಚ್ಚರಿಗೊಳಿಸುವ ವಿವರಗಳಿವೆ. ಅಲ್ಲಿ ಅವರು ಕನ್ನಡ ಜನಪದದ ಶಕ್ತಿಯ ಕುರಿತು ಬರೆದಿದ್ದಾರೆ. ಅತ್ಯಂತ ಮಹತ್ವದ ಕೃತಿ ಇದು.
ಪ್ರತಿ ವರ್ಷ ಅವರು ನಡೆಸುತ್ತಿದ್ದ(ಈಗಲೂ ಮುಂದುವರೆಯುತ್ತಿರುವ) " ಸಂಸ್ಕ್ರತಿ ಶಿಬಿರ"ದಲ್ಲಿ ಎಲ್ಲ ಬಗೆಯ ಚಿಂತನೆಗಳಿಗೆ ವೇದಿಕೆಯನ್ನೊದಗಿಸಿ ಕರ್ನಾಟಕದೆಲ್ಲಡೆಯಿಂದ ಬಂದ ಶಿಬಿರಾರ್ಥಿಗಳಿಗೆ ಆ ಮಂಥನದ ಕೆನೆವಾಲನ್ನು ಉಣಬಡಿಸುವ ಕೆಲಸವನ್ನು ಸಾರ್ಥಕವಾಗಿ ನಡೆಸಿಕೊಂಡು ಬಂದು ಅಲ್ಲಿ ಅಲ್ಲದೇ ಬೇರೆಲ್ಲಿ ಲಭ್ಯ ಆಗಲಾರದಂಥ ಚಿಂತಕರ ನೇರ ಸಂಪರ್ಕವನ್ನು ಕನ್ನಡದ ಕಾಲೇಜಿನ ಮಕ್ಕಳಿಗೆ ಮಾಡಿಸಿದ್ದಾರೆ. ಇವರ ಮಗ ಕೆ.ವಿ.ಅಕ್ಷರ ಸಹ ನಾಟಕ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.