ನೊಬೆಲ್ ಪ್ರಶಸ್ತಿ
From Wikipedia
ನೊಬೆಲ್ ಪ್ರಶಸ್ತಿಯು ಶ್ರೀ ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ಮಾನವ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ. ಇವನ್ನು ಕೆಳಗೆ ನಮೂದಿಸಿರುವ ವಿಭಾಗಗಳಿಗೆ ಪ್ರದಾನಿಸಲಾಗುತ್ತದೆ. ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ.
ನವೆಂಬರ್ ೨೦೦೫ರವರೆಗೆ ಒಟ್ಟು ೭೭೬ ನೊಬೆಲ್ ಪದಕಗಳನ್ನು ನೀಡಲಾಗಿದೆ. (೭೫೮ನ್ನು ಸಾಧಕರಿಗೂ ಉಳಿದ ೧೮ನ್ನು ಸಂಸ್ಥೆಗಳಿಗೆ ನೀಡಲಾಗಿದೆ).
ಪರಿವಿಡಿ |
[ಬದಲಾಯಿಸಿ] ಪ್ರಶಸ್ತಿಯ ಇತಿಹಾಸ
ಆಲ್ಫ್ರೆಡ್ ನೋಬೆಲ್ 'ಡೈನಮೈಟ್' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, ೧೮೯೫ರಲ್ಲಿ ತನ್ನ ಸಂಪತ್ತಿನ ೯೪% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ. ಈ ಪ್ರಕಾರವಾಗಿ ೧೯೦೧ರಲ್ಲಿ ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.
[ಬದಲಾಯಿಸಿ] ವಿವಿಧ ಪುರಸ್ಕಾರಗಳು
- ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ.)
- ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ.)
- ವೈದ್ಯಶಾಸ್ತ್ರ ನೊಬೆಲ್ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ಕ್ಯಾರೋಲಿನ್‌ಸ್ಕಾ ಸಂಸ್ಥೆ)ಯು ನಿರ್ಧರಿಸುತ್ತದೆ.)
- ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ.)
- ನೊಬೆಲ್ ಶಾಂತಿ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದನಾರ್ವೆಯ ನೊಬೆಲ್ ಸಮಿತಿ)ಯು ನಿರ್ಧರಿಸುತ್ತದೆ.)
- ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ (ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ)ಯು ನಿರ್ಧರಿಸುತ್ತದೆ.) (ಇದನ್ನು ಅರ್ಥ ಶಾಸ್ತ್ರ ದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು ೧೯೬೯ ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)
[ಬದಲಾಯಿಸಿ] ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು
೨೦೦೬ರ ವರೆಗೆ ಭಾರತೀಯರಾದ (ಅಥವ ಭಾರತೀಯ ಮೂಲದ) ೬ ಜನಕ್ಕೆ ಈ ಪ್ರಶಸ್ತಿ ಸಂದಿದೆ. ಇವರುಗಳು
- ೧. ರವೀಂದ್ರನಾಥ ಠಾಗೋರ್ - ಸಾಹಿತ್ಯದಲ್ಲಿ (೧೯೧೩)
- ೨. ಸಿ. ವಿ. ರಾಮನ್ - ಭೌತಶಾಸ್ತ್ರದಲ್ಲಿ (೧೯೩೦)
- ೩. ಹರಗೋಬಿಂದ್ ಖೊರಾನ - ವೈದ್ಯಶಾಸ್ತ್ರದಲ್ಲಿ (೧೯೬೮)
- ೪. ಮದರ್ ತೆರೇಸಾ - ಶಾಂತಿ ಪ್ರಶಸ್ತಿ (೧೯೭೯)
- ೫. ಸುಬ್ರಮಣ್ಯಮ್ ಚಂದ್ರಶೇಖರ್ - ಭೌತಶಾಸ್ತ್ರದಲ್ಲಿ (೧೯೮೩)
- ೬. ಅಮರ್ತ್ಯ ಸೇನ್ - ಅರ್ಥಶಾಸ್ತ್ರದಲ್ಲಿ (೧೯೯೮)