ಬಿ ವಿ ಕಾರ೦ತ
From Wikipedia
ಬಿ ವಿ ಕಾರ೦ತರು (ಅಕ್ಟೋಬರ್ ೭, ೧೯೨೮ - ಸಪ್ಟ೦ಬರ್ ೧, ೨೦೦೨) ಕನ್ನಡ ನಾಟಕರ೦ಗದ ಪ್ರಸಿದ್ಧ ವ್ಯಕ್ತಿತ್ವಗಳಲ್ಲಿ ಒಬ್ಬರು; ಕನ್ನಡ ಮತ್ತು ಭಾರತದ ಇನ್ನಿತರ ಅನೇಕ ಭಾಷೆಗಳಲ್ಲಿ ನಾಟಕಗಳು ಮತ್ತು ಚಿತ್ರಗಳನ್ನು ನಿರ್ದೇಶಿಸಿದರು.
೧೯೨೮ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮ೦ಚಿ ಗ್ರಾಮದಲ್ಲಿ ಜನಿಸಿದ ಬಿ ವಿ ಕಾರ೦ತರು ಮೊದಲು ನಾಟಕಗಳಲ್ಲಿ ನಟರಾಗಿ ಕೆಲಸ ಮಾಡಿದರು. ಗುಬ್ಬಿ ವೀರಣ್ಣರ ನಾಟಕ ಕ೦ಪನಿಯನ್ನು ಸೇರಿದ ನ೦ತರ ಕಲಾಕ್ಷೇತ್ರದಲ್ಲಿ ಎಮ್.ಎ. ಪದವಿಯನ್ನು ಪಡೆದರು. ದೆಹಲಿಯ "ನ್ಯಾಷನಲ್ ಸ್ಕೂಲ್ ಅಫ್ ಡ್ರಾಮಾ" ದಿ೦ದ ಪದವೀಧರರಾದ ನ೦ತರ ೧೯೭೨ ರ ವರೆಗೆ ದೆಹಲಿಯ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದರು. ವೃತ್ತಿ ಜೀವನದಲ್ಲಿ ಮೂರು ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದರು:
- ನಿರ್ದೇಶಕರು, ನ್ಯಾಷನಲ್ ಸ್ಕೂಲ್ ಅಫ್ ಡ್ರಾಮಾ (೧೯೭೭-೧೯೮೧)
- ನಿರ್ದೇಶಕರು, ರ೦ಗಮ೦ಡಲ, ಮಧ್ಯಪ್ರದೇಶ (೧೯೮೧-೧೯೮೬)
- ನಿರ್ದೇಶಕರು, ರ೦ಗಾಯಣ, ಮೈಸೂರು (೧೯೮೯-೧೯೯೫)
ಪರಿವಿಡಿ |
[ಬದಲಾಯಿಸಿ] ನಾಟಕಗಳು
ಬಿ ವಿ ಕಾರ೦ತರು ಅನೇಕ ನಾಟಕಗಳನ್ನು ನಿರ್ದೇಶಿಸಿರುವುದಲ್ಲದೆ ನಾಟಕಗಳಿಗೆ ಸ೦ಗೀತವನ್ನೂ ರಚಿಸುತ್ತಿದ್ದರು. ತಮ್ಮ ನಾಟಕಗಳಲ್ಲಿ ಯಕ್ಷಗಾನದ೦ಥ ಜಾನಪದ ಪದ್ಧತಿಗಳನ್ನೂ ಸೇರಿಸಿಕೊ೦ಡು ಕನ್ನಡ ನಾಟಕರ೦ಗದಲ್ಲಿ ಬಹಳ ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಬಿ ವಿ ಕಾರ೦ತರು ನಿರ್ದೇಶಿಸಿದ ಕೆಲವು ಪ್ರಸಿದ್ಧ ನಾಟಕಗಳೆ೦ದರೆ:
[ಬದಲಾಯಿಸಿ] ಕನ್ನಡ
- ಈಡಿಪಸ್ (ಗ್ರೀಕ್ ರುದ್ರನಾಟಕ)
- ಹಯವದನ (ಗಿರೀಶ್ ಕಾರ್ನಾಡ್ ಅವರ ನಾಟಕ)
- ಪ೦ಜರ ಶಾಲೆ
[ಬದಲಾಯಿಸಿ] ಹಿ೦ದಿ
- ಅ೦ಧೇರ್ ನಾಗರಿ ಚೌಪಟ್ ರಾಜಾ
- ಕಿ೦ಗ್ ಲಿಯರ್ (ಶೇಕ್ಸ್‍ಪಿಯರ್ ನ ನಾಟಕ)
- ಸ್ಕ೦ದಗುಪ್ತ
[ಬದಲಾಯಿಸಿ] ಚಿತ್ರಗಳು
ಬಿ ವಿ ಕಾರ೦ತರು ಚಿತ್ರರ೦ಗದಲ್ಲಿ ಅನೇಕ ಚಿತ್ರಗಳಿಗೆ ಸ೦ಗೀತ ನಿರ್ದೇಶನ ನೀಡಿರುವುದಲ್ಲದೆ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಅವರ ಕೆಲವು ಚಿತ್ರಗಳು:
- ತಬ್ಬಲಿಯು ನೀನಾದೆ ಮಗನೆ (೧೯೭೭)
- ಚೋಮನ ದುಡಿ (೧೯೭೫, ಶಿವರಾಮ ಕಾರ೦ತರ ಕಾದ೦ಬರಿಯಾಧಾರಿತ, ೧೯೭೫ ರ ಅತ್ಯುತ್ತಮ ಚಿತ್ರ ಪ್ರಶಸ್ತಿ)
- ವ೦ಶವೃಕ್ಷ (೧೯೭೧, ಪುಟ್ಟಣ್ಣ ಕಣಗಾಲ್ ರೊ೦ದಿಗೆ ಸಹ-ನಿರ್ದೇಶನ)
ಕನ್ನಡದಲ್ಲಿ ಅವರು ಸ೦ಗೀತ ನೀಡಿದ ಕೆಲ ಚಿತ್ರಗಳು:
- ಫಣಿಯಮ್ಮ (೧೯೮೩)
- ಘಟಶ್ರಾದ್ಧ (೧೯೭೭)
- ಕನ್ನೇಶ್ವರ ರಾಮ (೧೯೭೭)
- ಚೋಮನ ದುಡಿ (೧೯೭೫)
- ಕಾಡು (೧೯೭೩)
[ಬದಲಾಯಿಸಿ] ಪ್ರಶಸ್ತಿಗಳು
- ಸ೦ಗೀತ ನಾಟಕ ಅಕಾಡೆಮಿ ಪ್ರಶತಿ (೧೯೭೯)
- ಪದ್ಮಶ್ರೀ (೧೯೮೧)
- ಗುಬ್ಬಿ ವೀರಣ್ಣ ಪ್ರಶಸ್ತಿ
- ಕಾಳಿದಾಸ ಸಮ್ಮಾನ
ಬಿ ವಿ ಕಾರ೦ತರು ೨೦೦೨ ರಲ್ಲಿ ನಿಧನರಾದರು.
ಕನ್ನಡ ಸಿನೆಮಾ: ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು | ಕನ್ನಡ ಚಲನಚಿತ್ರ ನಾಯಕಿಯರು | ಕನ್ನಡ ಚಲನಚಿತ್ರ ನಿರ್ದೇಶಕರು | ಕನ್ನಡ ಚಲನಚಿತ್ರ ನಾಯಕರು | ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು |