ರಾಮಕೃಷ್ಣ ಹೆಗಡೆ
From Wikipedia
ರಾಮಕೃಷ್ಣ ಹೆಗಡೆ (೧೯೨೬-೨೦೦೪), ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದರು. ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು.
ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ ೧೯೨೬, ಅಗಸ್ಟ್ ೨೯ ರಂದು ಜನಿಸಿದರು.ಕೃಷಿಕ ಕುಟುಂಬದಿಂದ ಬಂದ ಇವರು ನ್ಯಾಯ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗವಹಿಸಿದ್ದ ಇವರು ೧೯೪೨ ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನೊ ಅನುಭವಿಸಿದ್ದರು.
ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿಯೂ ಸೇವೆಸಲ್ಲಿಸಿದ್ದರು. ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ೧೯೮೩ ರಲ್ಲಿ ಅಧಿಕಾರ ವಹಿಸಿಕೊಂಡ ಹೆಗಡೆಯವರು, ರಾಜ್ಯದಲ್ಲಿ "ಪಂಚಾಯತ್ ರಾಜ್" ವ್ಯವಸ್ಥೆಯನ್ನು ಮೊದಲಿಗೆ ಜಾರಿಗೆ ತಂದರು. ಕೇಂದ್ರದಲ್ಲಿ ವಾಜಪೇಯಿಯವರ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿಯೂ ಸೇವೆಸಲ್ಲಿಸಿದ್ದ ಹೆಗಡೆಯವರು ೨೦೦೪ ಜನವರಿ ೧೨ರಂದು ನಿಧನರಾದರು.
[ಬದಲಾಯಿಸಿ] ಕರ್ನಾಟಕದ ಮುಖ್ಯಮಂತ್ರಿಗಳು
ಹೆಚ್.ಡಿ.ಕುಮಾರಸ್ವಾಮಿ | ಧರಮ್ ಸಿಂಗ್ | ಎಸ್.ಎಂ.ಕೃಷ್ಣ | ಜೆ ಹೆಚ್ ಪಟೇಲ್ | ಹೆಚ್.ಡಿ.ದೇವೇಗೌಡ | ವೀರಪ್ಪ ಮೊಯ್ಲಿ | ಬಂಗಾರಪ್ಪ | ವೀರೇಂದ್ರ ಪಾಟೀಲ್ | ಎಸ್ ಆರ್ ಬೊಮ್ಮಾಯಿ | ರಾಮಕೃಷ್ಣ ಹೆಗಡೆ | ಆರ್ ಗುಂಡೂರಾವ್ | ಡಿ ದೇವರಾಜ ಅರಸ್ | ಎಸ್. ನಿಜಲಿಂಗಪ್ಪ | ಎಸ್ ಆರ್ ಕಂಠಿ | ಬಿ ಡಿ ಜತ್ತಿ | ಕಡಿದಾಳ್ ಮಂಜಪ್ಪ | ಕೆಂಗಲ್ ಹನುಮಂತಯ್ಯ | ಚೆಂಗಲರಾಯ ರೆಡ್ಡಿ