ಸೋರಟ್ ಅಶ್ವಥ್
From Wikipedia
ಸೋರಟ್ ಅಶ್ವಥ್ - (೧೯೧೫-೧೯೯೮) - ಕನ್ನಡ ಚಿತ್ರರಂಗದ ಹೆಸರಾಂತ ಚಿತ್ರಸಾಹಿತಿಗಳಲ್ಲೊಬ್ಬರು. ಭಕ್ತ ಕನಕದಾಸ ಸೇರಿದಂತೆ ಕೆಲವು ಚಲನಚಿತ್ರಗಳಲ್ಲಿ ಪೋಷಕಪಾತ್ರದಲ್ಲಿ ನಟಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಬಾಲ್ಯ
ನಂಜನಗೂಡಿನ ವೈದಿಕ ಮನೆತನದ ಅಗ್ನಿಹೋತ್ರಿ ಲಕ್ಷ್ಮೀನರಸಿಂಹ ಶಾಸ್ತ್ರಿಗಳ ಜ್ಯೇಷ್ಠ ಪುತ್ರನಾಗಿ ಸೋರಟ್ ಅಶ್ವಥ್ ೧೯೧೫ರ ಫೆಬ್ರವರಿ ೧೫ರಂದು ಜನಿಸಿದರು. ಇವರ ಬಾಲ್ಯದ ಹೆಸರು ಅಶ್ವಥ್ ನಾರಾಯಣ ಶಾಸ್ತ್ರಿ. ಮೈಸೂರಿನ ವೆಸ್ಲಿ ಮಿಷನರಿ ಸ್ಕೂಲಿನಲ್ಲಿ ಓದಿದ ಇವರು ಸಂಸ್ಕೃತ ಶಾಲೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದರು. ಪ್ರತಿಭಾವಂತರಾಗಿದ್ದರೂ ತಂದೆಯ ಅನಾರೋಗ್ಯದಿಂದ ವಿದ್ಯಾಭ್ಯಾಸ ಅರ್ಧಕ್ಕೆ ನಿಂತುಹೋಯಿತು.
[ಬದಲಾಯಿಸಿ] ರಂಗಭೂಮಿ
ನಟ ಭಯಂಕರ ಗಂಗಾಧರರಾಯರು ಇವರ ಪ್ರತಿಭೆಯನ್ನು ಗುರುತಿಸಿ ರಂಗಪ್ರವೇಶ ಮಾಡಿಸಿದರು. ಮಹಮ್ಮದ್ ಪೀರ್ ಅವರ ನಾಟಕ ಮಂಡಳಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು.
[ಬದಲಾಯಿಸಿ] ಚಿತ್ರರಂಗ
೧೯೪೦ರಲ್ಲಿ ಎಂ.ವಿ.ರಾಜಮ್ಮನವರ ರಾಧಾರಮಣ ಚಿತ್ರದಲ್ಲಿ ಕಿರು ಪಾತ್ರ ವಹಿಸುವ ಮೂಲಕ ಬೆಳ್ಳಿತೆರೆ ನಂಟಿಗೆ ಬಂದರು. ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರೂ ಹೇಳಿಕೊಳ್ಳುವ ಬೆಳವಣಿಗೆ ಸಿಕ್ಕಲಿಲ್ಲ. ಮಹಾನಂದ ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದೂ ಆಯಿತು. ಮತ್ತೆ ರಂಗಭೂಮಿಗೆ ಮರಳಿದ ಅಶ್ವಥ್ ೧೯೪೯ರಲ್ಲಿ ಜ್ಯೋತಿ ಕಲಾ ಸಂಘ ಎಂಬ ನಾಟಕ ಸಂಸ್ಥೆ ಆರಂಭಿಸಿದರು. ಅದರಲ್ಲೂ ಅಂಥ ಯಶಸ್ಸು ಕಾಣಲಿಲ್ಲ.
೧೯೫೩ರಲ್ಲಿ ಬೇಂದ್ರೆಯವರು ವಿಚಿತ್ರ ಪ್ರಪಂಚ ಚಿತ್ರಕ್ಕೆ ಬರೆದ ಸಂಭಾಷಣೆಗಳು ಪಾತ್ರಧಾರಿಗಳಿಗೆ ಕಠಿಣವಾದಾಗ ಅದನ್ನು ಸರಳಗೊಳಿಸುವ ಮಹತ್ತರ ಜವಾಬ್ದಾರಿ ಇವರಿಗೆ ಬಂದಿತು. ಸೋರಟ್ ಅಶ್ವಥ್ ಎಂಬ ನಾಮಧೇಯ ಬಂದದ್ದು ಅಲ್ಲಿಂದಲೇ. ಮನೆ ತುಂಬಿದ ಹೆಣ್ಣು ಚಿತ್ರಕ್ಕೆ ಗೀತೆಗಳನ್ನು ರಚಿಸುವ ಅವಕಾಶ ಲಭಿಸಿತು. ಇಲ್ಲಿಂದ ಗೀತರಚನಕಾರರಾಗಿ ಅವರು ಯಶಕಂಡರು.
ನಂದಾದೀಪ, ಗಾಳಿಗೋಪುರ, ನವಜೀವನ, ಕಠಾರಿವೀರ ಚಿತ್ರಗಳಿಗೆ ಅವರು ಬರೆದ ಗೀತೆಗಳು ಬಹು ಜನಪ್ರಿಯವಾದವು. ೧೯೭೨ರಲ್ಲಿ ಸ್ನೇಹಿತರೊಡಗೂಡಿ ಬಾಂಧವ್ಯ ಎಂಬ ಚಲನಚಿತ್ರ ನಿರ್ಮಿಸಿದರು. ಚಿತ್ರ ಸದಭಿರುಚಿಯದು ಎಂದು ಹೆಸರು ಮಾಡಿದರೂ ವಿತರಕರ ಸಮಸ್ಯೆಯಿಂದ ಅಶ್ವಥ್ ನಷ್ಟ ಕಂಡರು. ೧೯೭೪ರಲ್ಲಿ ಶನಿಪ್ರಭಾವ ಎಂಬ ಇನ್ನೊಂದು ಪೌರಾಣಿಕ ಚಿತ್ರ ನಿರ್ಮಿಸಿದರು. ಇಲ್ಲೂ ಕೂಡ ನಷ್ಟ ಅನುಭವಿಸಿದರು. ಹಲವು ಕಷ್ಟದ ದಿನಗಳನ್ನು ಕಂಡ ಅಶ್ವಥ್ ಅವರಿಗೆ ಪಡುವಾರಳ್ಳಿ ಪಾಂಡವರು ಚಿತ್ರಕ್ಕೆ ಬರೆದ ಗೀತೆಗಳು ಮತ್ತೊಮ್ಮೆ ಹೆಸರನ್ನು ತಂದುಕೊಟ್ಟವು.
೬೦ ಚಿತ್ರಗಳಿಗೆ ಸಂಭಾಷಣೆ, ೧೬೦ ಚಿತ್ರಗೀತೆಗಳು ಅಶ್ವಥರಿಂದ ಸಂದಿದ್ದರೂ ಕನ್ನಡ ಚಿತ್ರರಂಗ ತನ್ನ ವೈಭವದ ಯುಗದಲ್ಲಿ ಅವರನ್ನು ಸಂಪೂರ್ಣ ನಿರ್ಲಕ್ಷಿಸಿತು ಎಂದು ವಿಮರ್ಶಕರ ಅಭಿಪ್ರಾಯ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೂಮಳೆ ಚಿತ್ರದ ಅಭಿನಯ ಅವರಿಗೆ ದೊರೆತ ಬೆಳ್ಳಿತೆರೆಯ ಕೊನೆಯ ಅವಕಾಶ.
[ಬದಲಾಯಿಸಿ] ನಿಧನ
೧೯೯೮ರ ಫೆಬ್ರವರಿ ೫ರಂದು ಸೋರಟ್ ಅಶ್ವಥ್ ಅವರು ನಿಧನ ಹೊಂದಿದರು.
[ಬದಲಾಯಿಸಿ] ಗೀತೆರಚನೆ ಒದಗಿಸಿರುವ ಚಿತ್ರಗಳು
ಕನ್ನಡ ಚಿತ್ರರಂಗದ ಚಿತ್ರಸಾಹಿತಿಗಳು
ಬೆಳ್ಳಾವೆ ನರಹರಿ ಶಾಸ್ತ್ರಿ | ಹುಣಸೂರು ಕೃಷ್ಣಮೂರ್ತಿ | ಚಿ.ಸದಾಶಿವಯ್ಯ | ಸೋರಟ್ ಅಶ್ವಥ್ | ಕು.ರಾ.ಸೀತಾರಾಮಶಾಸ್ತ್ರಿ | ಜಿ.ವಿ.ಅಯ್ಯರ್ | ಕಣಗಾಲ್ ಪ್ರಭಾಕರ ಶಾಸ್ತ್ರಿ | ಚಿ.ಉದಯಶಂಕರ್ | ಆರ್.ಎನ್.ಜಯಗೋಪಾಲ್ | ವಿಜಯನಾರಸಿಂಹ | ಕರೀಂಖಾನ್ | ದೊಡ್ಡರಂಗೇಗೌಡ | ಪಿ.ಲಂಕೇಶ್ | ಹಂಸಲೇಖ | ವಿ.ಮನೋಹರ್ | ಕೆ.ಕಲ್ಯಾಣ್ | ವಿ.ನಾಗೇಂದ್ರ ಪ್ರಸಾದ್ | ಕವಿರಾಜ್ | ಎಸ್.ನಾರಾಯಣ್ | ಉಪೇಂದ್ರ | ರವಿಚಂದ್ರನ್ | ಪ್ರೇಂ | ನಾಗತಿಹಳ್ಳಿ ಚಂದ್ರಶೇಖರ್