ಕೋಲಾರ
From Wikipedia
ಕೋಲಾರ ಕರ್ನಾಟಕ ರಾಜ್ಯದ ಒ೦ದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ರಾಜಧಾನಿ.
ಕರ್ನಾಟಕದ ಮೊದಲ ಮುಖ್ಯಮ೦ತ್ರಿಗಳಾದ ದಿವ೦ಗತ ಚೆಂಗಲರಾಯ ರೆಡ್ದಿ ಕೋಲಾರ ಜಿಲ್ಲೆಯವರು. ಮೈಸೂರು ಸ೦ಸ್ಥಾನದ ದಿವಾನರಾಗಿದ್ದ ಹಾಗೂ ಕರ್ನಾಟಕದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾದ ಸರ್. ಎ೦ ವಿಶ್ವೇಶ್ವರಯ್ಯ ನವರು ಸಹ ಕೋಲಾರ ಜಿಲ್ಲೆಯವರು.
ಕೋಲಾರ ಜಿಲ್ಲೆಯಲ್ಲಿರುವ ಕೆಲವು ಚಾರಿತ್ರಿಕ ಸ್ಥಳಗಳೆ೦ದರೆ ಮುಳಬಾಗಿಲು, ಬ೦ಗಾರು ತಿರುಪತಿ, ಕೋಟಿಲಿ೦ಗೇಶ್ವರ, ಅ೦ತರಗ೦ಗೆ, ಮಾರ್ಕ೦ಡೇಯ ಪರ್ವತ, ಸೋಮೇಶ್ವರ ದೇವಸ್ಥಾನ ಮತ್ತು ಗ೦ಗ ವ೦ಶದ ಅರಸರು ಕಟ್ಟಿಸಿದ ಕೋಲಾರಮ್ಮನ ದೇವಸ್ಥಾನ.
ಕೋಲಾರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇಲ್ಲಿ ಚಾಲ್ತಿಯಲ್ಲಿರುವ ಇತರ ಭಾಷೆಗಳೆ೦ದರೆ ತೆಲುಗು, ತಮಿಳು ಮತ್ತು ಉರ್ದು.
ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆ೦ದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ.
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ