ಬಿ.ಆರ್.ಪಂತುಲು
From Wikipedia
ಬಿ.ಆರ್. ಪಂತುಲು(೧೯೧೧ ಜುಲೈ ೨೬ - ೧೯೭೪ ಅಕ್ಟೋಬರ್ ೮) - ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರರೆಂದೇ ಪ್ರಸಿದ್ಧಿ.
ಪರಿವಿಡಿ |
[ಬದಲಾಯಿಸಿ] ಜೀವನ
ಬಿ. ರಾಮಕೃಷ್ಣ ಪಂತುಲು ಅವರು ಜನಿಸಿದ್ದು ೧೯೧೧ ಜುಲೈ ೨೬ರಂದು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿನ ಗುಡುಗೂರಿನಲ್ಲಿ. ಉಪಾಧ್ಯಾಯ ವೃತ್ತಿಯಲ್ಲಿದ್ದ ಇವರಿಗೆ ಹೆಚ್ ಎಲ್ ಎನ್ ಸಿಂಹ ಮತ್ತು ಮಹಮದ್ ಪೀರ್ ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು.
[ಬದಲಾಯಿಸಿ] ಚಿತ್ರರಂಗ
೧೯೩೬ರಲ್ಲಿ ಸಂಸಾರ ನೌಕೆ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.
೧೯೫೫ರಲ್ಲಿ ಪ.ನೀಲಕಂಠನ್ ಸಹಯೋಗದೊಂದಿಗೆ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ಸ್ಥಾಪಿಸಿ, ಮೊದಲ ತೇದಿ ಎಂಬ ಚಿತ್ರ ನಿರ್ಮಿಸಿದರು. ಎರಡನೆ ಚಿತ್ರ ಶಿವಶರಣೆ ನಂಬೆಕ್ಕ.
೧೯೫೭ರಲ್ಲಿ ಕುತೂಹಲಭರಿತ ರತ್ನಗಿರಿ ರಹಸ್ಯ ಎಂಬ ಚಿತ್ರವನ್ನು ನಿರ್ಮಿಸಿದರು. ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಾಹಿತ್ಯ, ಟಿ ಜಿ ಲಿಂಗಪ್ಪ ಅವರ ಸಂಗೀತ ಈ ಚಿತ್ರಕ್ಕೆ ಅಪಾರ ಯಶಸ್ಸನ್ನು ತಂದುಕೊಡುವಲ್ಲಿ ನೆರವಾದವು. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಸಾಮಾಜಿಕ ಚಿತ್ರವೆಂದು ಖ್ಯಾತಿ ಪಡೆದ ಸ್ಕೂಲ್ ಮಾಸ್ಟರ್ ಚಿತ್ರವನ್ನು ೧೯೫೮ರಲ್ಲಿ ನಿರ್ಮಿಸಿದರು.
ಅನಂತರ ಅವರ ಪದ್ಮಿನಿ ಪಿಕ್ಚರ್ಸ್‍ನಲ್ಲಿ ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಚಿನ್ನದ ಗೊಂಬೆ, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಶ್ರೀ ಕೃಷ್ಣದೇವರಾಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ ಮುಂತಾದ ಅಮೋಘ ಚಿತ್ರಗಳು ನಿರ್ಮಾಣವಾದವು. ಇವುಗಳಲ್ಲಿ ಸ್ಕೂಲ್ ಮಾಸ್ಟರ್ ಮತ್ತು ಕಿತ್ತೂರು ಚೆನ್ನಮ್ಮ ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದವು.
[ಬದಲಾಯಿಸಿ] ಅಂತ್ಯ
ಕಾಲೇಜು ರಂಗ ಚಿತ್ರದ ಸಿದ್ಧತೆಯಲ್ಲಿದ್ದಾಗ, ಅಕ್ಟೋಬರ್ ೮, ೧೯೭೪ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರ ಪಟ್ಟ ಶಿಷ್ಯ ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಪೂರ್ತಿ ಮಾಡಿ, ಗುರುಕಾಣಿಕೆಯಾಗಿ ಅರ್ಪಿಸಿದರು. ಇದು ಪದ್ಮಿ ಪಿಕ್ಚರ್ಸ್‍ನ ಕೊನೆಯ ಚಿತ್ರವಾಯಿತು. ಆ ಮೂಲಕ ಭಾರತೀಯ ಚಿತ್ರರಂಗದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಿತು.
ಪುಟ್ಟಣ್ಣ ಕಣಗಾಲರ ಪ್ರಕಾರ ಜನಸಾಮಾನ್ಯರನ್ನು ಚಿತ್ರಮಂದಿರಗಳತ್ತ ತರುವಂತೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದು ಈ ಬಿ.ಆರ್. ಪಂತುಲು.
[ಬದಲಾಯಿಸಿ] ಬಿ.ಆರ್. ಪಂತುಲು ನಿರ್ದೇಶನದ ಚಿತ್ರಗಳು
ವರ್ಷ | ಚಿತ್ರ |
---|---|
೧೯೫೭ | ರತ್ನಗಿರಿ ರಹಸ್ಯ |
೧೯೫೮ | ಸ್ಕೂಲ್ ಮಾಸ್ಟರ್ |
೧೯೬೦ | ಮಕ್ಕಳ ರಾಜ್ಯ |
೧೯೬೧ | ಕಿತ್ತೂರು ಚೆನ್ನಮ್ಮ |
೧೯೬೨ | ಗಾಳಿಗೋಪುರ |
೧೯೬೩ | ಸಾಕು ಮಗಳು |
೧೯೬೪ | ಚಿನ್ನದ ಗೊಂಬೆ |
೧೯೬೬ | ದುಡ್ಡೇ ದೊಡ್ಡಪ್ಪ |
೧೯೬೬ | ಎಮ್ಮೆ ತಮ್ಮಣ್ಣ |
೧೯೬೭ | ಗಂಗೆ ಗೌರಿ |
೧೯೬೭ | ಬೀದಿ ಬಸವಣ್ಣ |
೧೯೬೮ | ಚಿನ್ನಾರಿ ಪುಟ್ಟಣ್ಣ |
೧೯೬೮ | ಅಮ್ಮ |
೧೯೬೯ | ಗಂಡೊಂದು ಹೆಣ್ಣಾರು |
೧೯೭೦ | ಶ್ರೀ ಕೃಷ್ಣದೇವರಾಯ |
೧೯೭೧ | ಅಳಿಯ ಗೆಳೆಯ |
೧೯೭೧ | ಮಾಲತಿ ಮಾಧವ |
೧೯೭೨ | ಒಂದು ಹೆಣ್ಣಿನ ಕಥೆ |
[ಬದಲಾಯಿಸಿ] ಬಿ.ಆರ್.ಪಂತುಲು ನಿರ್ಮಾಣದ ಕನ್ನಡೇತರ ಚಿತ್ರಗಳು
- ದಾನವೀರ ಕರ್ಣ - ಮೊದಲು ತೆಲಗು ಮತ್ತು ನಂತರ ಹಿಂದಿಯಲ್ಲಿ ತಯಾರಾದ ಚಲನಚಿತ್ರ (1965)
- ಅಮರ್ ಶಹೀದ್ - ಮೊದಲು ತಮಿಳು ಮತ್ತು ನಂತರ ಹಿಂದಿಯಲ್ಲಿ ತಯಾರಾದ ಚಲನಚಿತ್ರ (1960)
- ವೀರ ಪಾಂಡ್ಯ ಕಟ್ಟಬೊಮ್ಮನ್- ತಮಿಳು ಮತ್ತು ನಂತರ ತೆಲಗುವಿನಲ್ಲಿ ತಯಾರಾದ ಚಲನಚಿತ್ರ
- ದಶಾವತಾರ -ಭಾರತದ ಪ್ರಮುಖ ಭಾಷೆಗಳಲ್ಲಿ ತಯಾರಾದ ಚಿತ್ರ ( 1964)
ಕನ್ನಡ ಚಲನಚಿತ್ರ ನಿರ್ದೇಶಕರು
ವೈ.ವಿ.ರಾವ್ | ಎಂ.ಆರ್.ವಿಠಲ್ | ಹೆಚ್.ಎಲ್.ಎನ್ ಸಿಂಹ | ಡಿ.ಶಂಕರ್ ಸಿಂಗ್ | ಬಿ.ಆರ್.ಪಂತುಲು | ಕಣಗಾಲ್ ಪ್ರಭಾಕರ ಶಾಸ್ತ್ರಿ | ಜಿ.ವಿ.ಅಯ್ಯರ್ | ಆರ್.ನಾಗೇಂದ್ರರಾಯ | ಬಿ.ಎಸ್.ರಂಗಾ | ಆರ್.ಎನ್.ಜಯಗೋಪಾಲ್ | ಗೀತಪ್ರಿಯ | ಹುಣಸೂರು ಕೃಷ್ಣಮೂರ್ತಿ | ಆರೂರು ಪಟ್ಟಾಭಿ | ಸಿದ್ಧಲಿಂಗಯ್ಯ | ಪುಟ್ಟಣ್ಣ ಕಣಗಾಲ್ | ಗಿರೀಶ್ ಕಾರ್ನಾಡ್ | ಎಂ.ಎಸ್.ರಾಜಶೇಖರ್ | ಬಿ ವಿ ಕಾರಂತ | ಪ್ರೇಮಾ ಕಾರಂತ | ಗಿರೀಶ್ ಕಾಸರವಳ್ಳಿ | ನಾಗತಿಹಳ್ಳಿ ಚಂದ್ರಶೇಖರ್ | ನಾಗಾಭರಣ | ಟಿ. ಪಟ್ಟಾಭಿರಾಮ ರೆಡ್ಡಿ | ಸುರೇಶ್ ಹೆಬ್ಳಿಕರ್ | ಭಾರ್ಗವ | ರಾಜೇಂದ್ರಸಿಂಗ್ ಬಾಬು | ಡಿ.ರಾಜೇಂದ್ರ ಬಾಬು | ದೊರೈ-ಭಗವಾನ್ | ಎನ್. ಲಕ್ಷ್ಮಿ ನಾರಾಯಣ್ | ಕೆ.ಎಸ್.ಎಲ್.ಸ್ವಾಮಿ(ರವೀ) | ತಿಪಟೂರು ರಘು | ಕೆ.ಬಾಲಚಂದರ್ | ಮಣಿರತ್ನಂ | ಶಂಕರ್ ನಾಗ್ | ಸಿಂಗೀತಂ ಶ್ರೀನಿವಾಸ ರಾವ್ | ಜೋಸೈಮನ್ | ರಮೇಶ್ ಭಟ್ | ರವಿಚಂದ್ರನ್ | ಕಾಶೀನಾಥ್ | ಫಣಿ ರಾಮಚಂದ್ರ | ಪಿ.ಹೆಚ್.ವಿಶ್ವನಾಥ್ | ಎಸ್.ನಾರಾಯಣ್ | ಓಂಪ್ರಕಾಶ್ ರಾವ್ | ಉಪೇಂದ್ರ | ಸುನೀಲ್ ಕುಮಾರ್ ದೇಸಾಯಿ | ಪ್ರೇಂ | ಮಹೇಂದರ್ | ಓಂ ಸಾಯಿಪ್ರಕಾಶ್ | ವಿ.ಮನೋಹರ್ | ಸುದೀಪ್ | ರಮೇಶ್ | ಮಾ.ಕಿಶನ್ | ಕವಿತಾ ಲಂಕೇಶ್| ಪಿ ಲಂಕೇಶ್ | ಇಂದ್ರಜಿತ್ ಲಂಕೇಶ್ | ರವಿ ಶ್ರೀವತ್ಸ | ಜಯಂತಿ | ಆರತಿ | ಲಕ್ಷ್ಮಿ | ಲೋಕೇಶ್